ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ
Date : 19-12-2025
ದಿನಾಂಕ:19.12.2025 ರಂದು ಸಂಜೆ 06-15 ಗಂಟೆಗೆ ಶ್ರೀಮಠದ ಮಾನ್ಯ ಮುಖ್ಯ ಆಡಳಿತಾಧಿಕಾರಿಗಳು ಮತ್ತು ಧಾರವಾಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಬಿ.ಎಸ್. ಭಾರತಿ ಇವರು ಆರತಿ ಮಾಡುವುದರೊಂದಿಗೆ ಉದ್ಘಾಟಿಸಿದರು. ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯಶ್ರೀ ಅಭಿನವ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಇವರು ವಹಿಸಿದ್ದರು. ಸಾನಿಧ್ಯವನ್ನು ಅ.ಬ.ಪ.ಪೂಜ್ಯಶ್ರೀ ಯಶವಂತ ಭುವಾ ಭೋದಲೆ ಮಹಾರಾಜರು ಪಂಡರಪುರ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಸಿ.ಎ. ಶ್ರೀ ಚನ್ನವೀರ ಮುಂಗುರವಾಡಿ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು, ಧರ್ಮದರ್ಶಿಗಳು ಹಾಗೂ ಅಪಾರ ಭಕ್ತವೃಂದ ಉಪಸ್ಥಿತರಿದ್ದರು.